BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಆರೋಗ್ಯ

ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ನೇತ್ರ ಮೈಕ್ರೋಸರ್ಜಿಕಲ್ ಕೌಶಲ್ಯ ಮತ್ತು ಸಿಮ್ಯುಲೇಶನ್ ಲ್ಯಾಬ್ ಉದ್ಘಾಟನೆ

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ (KMC)ದ ನೇತ್ರಶಾಸ್ತ್ರ ವಿಭಾಗವು ಕಸ್ತೂರ್ಬಾ ಆಸ್ಪತ್ರೆಯಲ್ಲಿ ನೇತ್ರ ಮೈಕ್ರೋಸರ್ಜಿಕಲ್ ಕೌಶಲ್ಯ ಮತ್ತು ಸಿಮ್ಯುಲೇಶನ್ ಲ್ಯಾಬ್ ಅನ್ನು ಇಂದು ಉದ್ಘಾಟಿಸಿದ್ದು, ಇದು ಸಿಮ್ಯುಲೇಶನ್ ಆಧಾರಿತ ಶಸ್ತ್ರಚಿಕಿತ್ಸಾ ಶಿಕ್ಷಣ ಮತ್ತು ತರಬೇತಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ. “ನೇತ್ರಶಾಸ್ತ್ರ ಸ್ನಾತಕೋತ್ತರ ತರಬೇತಿಗಾಗಿ ಈ ಸೌಲಭ್ಯವನ್ನು ನೀಡುತ್ತಿರುವ ಕರ್ನಾಟಕದ ಮೊದಲ ವೈದ್ಯಕೀಯ ಕಾಲೇಜು ಇದಾಗಿದೆ.”

ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಲ್ಯಾಬ್ ಅನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ನ ಸಹ ಉಪ ಕುಲಪತಿ ಡಾ ಶರತ್ ಕೆ ರಾವ್  ಉದ್ಘಾಟಿಸಿದರು. ನವೀನತೆ ಮತ್ತು ಸಿಮ್ಯುಲೇಶನ್ ಮೂಲಕ ಭವಿಷ್ಯದ ಶಸ್ತ್ರಚಿಕಿತ್ಸಕರ ತರಬೇತಿ ಉದ್ದೇಶದಿಂದ ಈ ಲ್ಯಾಬ್ ಸ್ಥಾಪಿಸಲಾಗಿದ್ದು, ಸುರಕ್ಷಿತ ಮತ್ತು ಸಂರಚಿತ ವಾತಾವರಣದಲ್ಲಿ ಕೈಚಳಕದ ಮೈಕ್ರೋಸರ್ಜಿಕಲ್ ಕೌಶಲ್ಯಗಳನ್ನು ವೃದ್ಧಿಸುವುದಕ್ಕೆ ಇದು ಸಹಕಾರಿಯಾಗಲಿದೆ.

ಕೆಎಂಸಿ ಮಣಿಪಾಲದ ಡೀನ್ ಡಾ. ಅನಿಲ್ ಕೆ. ಭಟ್, ಕಸ್ತೂರ್ಬಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ  ಡಾ. ಅವಿನಾಶ್ ಶೆಟ್ಟಿ,ಹಾಗೂ ನೇತ್ರ ಚಿಕಿತ್ಸಾ ವಿಭಾಗದ  ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ  ಡಾ. ಯೋಗಿಶ್ ಎಸ್. ಕಾಮತ್ ಉಪಸ್ಥಿತರಿದ್ದರು. ವಿಭಾಗದ ಅಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಆಡಳಿತ ಸಿಬ್ಬಂದಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೊಸ ಲ್ಯಾಬ್‌ನಲ್ಲಿ ಅತ್ಯಾಧುನಿಕ ಸಿಮ್ಯುಲೇಶನ್ ಮತ್ತು ವೆಟ್ ಲ್ಯಾಬ್ ಸೌಲಭ್ಯಗಳು ಲಭ್ಯವಿದ್ದು, ಇದರಲ್ಲಿ ಕಣ್ಣಿನ ಪೊರೆ  ಹಾಗೂ ವಿಟ್ರಿಯೋರೆಟಿನಲ್ ಶಸ್ತ್ರಚಿಕಿತ್ಸಾ ಮಾಡ್ಯೂಲ್‌ಗಳನ್ನು ಹೊಂದಿರುವ ಐ ಸಿ ಸರ್ಜಿಕಲ್ ಸಿಮ್ಯುಲೇಟರ್ (Haag Streit), ಉನ್ನತ ಮಟ್ಟದ ಮೈಕ್ರೋಸರ್ಜಿಕಲ್ ವೆಟ್ ಲ್ಯಾಬ್, ಅಲ್ಕೋನ್ ಲಾರಿಯೇಟ್  ಫೇಕೋ ಸಿಸ್ಟಮ್, ಹಾಗೂ ಝೆಯಿಸಿಸ್ ಒಪ್ಮಿ ವಿಸು ಎಸ್7  ಆಪರೇಟಿಂಗ್ ಮೈಕ್ರೋಸ್ಕೋಪ್ ಸೇರಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ ಶರತ್ ರಾವ್, ನೈಜ ಶಸ್ತ್ರಚಿಕಿತ್ಸೆಗೆ ಮುನ್ನ ತರಬೇತಿಗಾರರ ನಿಖರತೆ, ರೋಗಿ ಸುರಕ್ಷತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಿಮ್ಯುಲೇಶನ್ ಆಧಾರಿತ ತರಬೇತಿಯ ಮಹತ್ವವನ್ನು ಒತ್ತಿ ಹೇಳಿದರು. ಈ ಸೌಲಭ್ಯವು ಕೆಎಂಸಿ ಮಣಿಪಾಲದಲ್ಲಿ ನೇತ್ರವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.  ವೈದ್ಯಕೀಯ ಶಿಕ್ಷಣದಲ್ಲಿ ಶೈಕ್ಷಣಿಕ ಶ್ರೇಷ್ಠತೆ ಮತ್ತು ನವೀನತೆಗೆ ಮಾಹೆ  ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

ಲ್ಯಾಬ್ ಸೌಲಭ್ಯಗಳ ವಿವರ ಮತ್ತು ಮುಂದಿನ ಶೈಕ್ಷಣಿಕ ಕಾರ್ಯಕ್ರಮಗಳ ರೂಪುರೇಷೆಯನ್ನು ಡಾ. ಸೌಮ್ಯ ಎಸ್., ಸಹ ಪ್ರಾಧ್ಯಾಪಕರು ಹಾಗೂ ಕೋರ್ಸ್ ಸಂಯೋಜಕರು, ಡಾ. ಯೋಗಿಶ್ ಎಸ್. ಕಾಮತ್, ಮತ್ತು ಡಾ. ರುತ್ವಿ ದೋಷಿ, ಸ್ನಾತಕೋತ್ತರ ವಿದ್ಯಾರ್ಥಿ ಪ್ರತಿನಿಧಿ ಮಂಡಿಸಿದರು. ಇವರು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಫೆಲೋಗಳ ಕೌಶಲ್ಯಾಭಿವೃದ್ಧಿಯಲ್ಲಿ ಈ ಲ್ಯಾಬ್‌ನ ಪಾತ್ರವನ್ನು ವಿವರಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!