BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಶಿಕ್ಷಣ

ಉಡುಪಿ :ಎಂ ಜಿ ಎಂ ಸಂಧ್ಯಾ ಕಾಲೇಜಿನಲ್ಲಿ “ಬಿಯಾಂಡ್ ದಿ ಸ್ಕ್ರೋಲ್” ಅಂತರ್ ಕಾಲೇಜು ಉತ್ಸವಕ್ಕೆ ಭವ್ಯ ಸಮಾರೋಪ

ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜು, ಉಡುಪಿ ವತಿಯಿಂದ ಆಯೋಜಿಸಲಾದ “Beyond the Scroll – Rewriting the Social Narrative” ಅಂತರ್ ಕಾಲೇಜು ಉತ್ಸವವು ಸಂಜೆ ಭವ್ಯ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. ಸಂಜೆ 5 ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಆಟೋಮೊಬೈಲ್ ಅಭಿಮಾನಿ ಶ್ರೀ ನಿರೀಕ್ಷಿತ್ ಹೆಬ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ವೇದಿಕೆಗಳು ಅತ್ಯಂತ ಅಗತ್ಯವಾಗಿವೆ ಎಂದು ಹೇಳಿದರು. ಇಂದಿನ ಯುವಜನತೆ ಸೃಜನಾತ್ಮಕ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ವಹಿಸಿಕೊಂಡು, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಇಂತಹ ಉತ್ಸವಗಳಲ್ಲಿ ಭಾಗವಹಿಸುವುದರಿಂದ ಅವರ ಸಮಗ್ರ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ಹೇಳಿದರು. ಗೌರವ ಅತಿಥಿಗಳಾಗಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮೈಯ್ಯ, ಎಂ.ಜಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಎಂ. ವಿಶ್ವನಾಥ್ ಪೈ ಹಾಗೂ ಬಿಕಾಂ/ಬಿಬಿಎ ಸಂಯೋಜಕರಾದ ಡಾ. ಮಲ್ಲಿಕಾ ಎ. ಶೆಟ್ಟಿ ಉಪಸ್ಥಿತರಿದ್ದರು. .ಹಾಗೆಯೇ ಕಾರ್ಯಕ್ರಮದ ಸಂಯೋಜಕರಾದ ಯಾಸಿನ್ ಮನ್ನಾ ಉಪನ್ಯಾಸಕರು ಇಂಗ್ಲಿಷ್ ವಿಭಾಗ, ಎಂ ಜಿ ಎಂ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಪ್ರತಿನಿಧಿಯಾದ ನಂದನ್ ಕುಂದರ್ ಹಾಗೂ ಎಂ.ಜಿ.ಎಂ ಸಂಧ್ಯಾ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಪ್ರತಿನಿಧಿಯಾದ ಧೀರಜ್ ಉಪಸ್ಥಿತರಿದ್ದರು. ದಿನವಿಡೀ ನಡೆದ ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸೇಂಟ್ ಮೇರೀಸ್ ಸಿರಿಯನ್ ಕಾಲೇಜು,ಬ್ರಹ್ಮಾವರ ಅವರು ಒಟ್ಟು ಚಾಂಪಿಯನ್ ಆಗಿ ಟ್ರೋಫಿ ಹಾಗೂ ₹10,000 ನಗದು ಬಹುಮಾನವನ್ನು ಪಡೆದರು. ಶ್ರೀ ಜಗದ್ಗುರು ಚಂದ್ರಶೇಖರ ಭಾರತಿ ಮೆಮೋರಿಯಲ್ ಕಾಲೇಜು, ಶೃಂಗೇರಿ ಅವರು ರನ್ನರ್-ಅಪ್ ಆಗಿ ಟ್ರೋಫಿ ಹಾಗೂ ₹5,000 ನಗದು ಬಹುಮಾನವನ್ನು ಪಡೆದರು. ಪ್ರತ್ಯೇಕ ಸ್ಪರ್ಧೆಗಳ ವಿಜೇತರಿಗೆ ಟ್ರೋಫಿ ಹಾಗೂ ₹1,000 ನಗದು ಬಹುಮಾನವನ್ನು ನೀಡಲಾಗಿದ್ದು, ರನ್ನರ್-ಅಪ್‌ಗಳಿಗೆ ಟ್ರೋಫಿ ಹಾಗೂ ₹500 ನಗದು ಬಹುಮಾನವನ್ನು ನೀಡಲಾಯಿತು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!