ಟಿ.ಎ.ಪೈ ಆಂಗ್ಲಮಾಧ್ಯಮ ಪ್ರೌಢಶಾಲೆ: ಶಾಲಾ ಪ್ರಾರಂಭೋತ್ಸವ

ಕುಂಜಿಬೆಟ್ಟಿನ ಟಿ.ಎ.ಪೈ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲಿನಲ್ಲಿ ಜೂನ್‌ ೧ ರಂದು ಶಾಲಾ ಪ್ರಾರಂಭೋತ್ಸವವನ್ನು ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟು ಆಚರಿಸಲಾಯಿತು. ಶಾಲೆಗೆ ಬಂದ ವಿದ್ಯಾಥಿಗಳನ್ನು ಮುಖ್ಯ ಶಿಕ್ಷಕರು, ಶಿಕ್ಷಕೇತರ ವೃಂದದವರು ಬರಮಾಡಿಕೊಂಡರು.

ಮುಖ್ಯ ಶಿಕ್ಷಕಿರಾದ ಶ್ರೀಮತಿ ವಿನೋದಾ ಶೆಟ್ಟಿಯವರು ಶಾಲೆಯ ನೀತಿ ನಿಯಮಗಳ ಬಗ್ಗೆ ವಿದ್ಯಾಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಶಿಕ್ಷಕಿ ಶ್ರೀಮತಿ ರೂಪಶ್ರೀಯವರು ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಮೃದುಲಾ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು