ವಾರ್ಷಿಕ ಮಹಾಸಭೆಯು ದಿನಾಂಕ 19.09.2026 ರಂದು ವೈಷ್ಣವಿ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷರಾದ ಶ್ರೀ. ಹರೀಶ ಜಿ ಕಲ್ಮಾಡಿ ಸ್ವಾಗತಿಸಿ, ಕಾರ್ಯದರ್ಶಿ ಡಾ.ಬಾಲಚಂದ್ರ ರವರು ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಶ್ರೀ. ಗಣಪತಿ ಕಾಮತ್ ಅವರು ಗತ ವರ್ಷದ ಲೆಕ್ಕ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಮುಖ್ಯ ಸಲಹೆಗಾರರಾದ ಶ್ರೀ ಹೆಚ್ ಕೆ. ವಿಶ್ವನಾಥ ರಾವ್ ಅವರ ಸಾಧನೆ ಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು, ಹಾಗೂ ಕೊರಿಯೋಗ್ರಾಫರ್ ಶ್ರೀಮತಿ ಮುಕ್ತ ಮೇಡಂ, ಕೌನ್ಸಿಲ್ಲರ್ ಮಂಜುನಾಥ್ ಹಾಗೂ ಬಿಗ್ ಬಾಸ್ ಹೋಟೆಲ್ ನ ಮಾಲೀಕರಾದ ಶ್ರೀ ದೇವು ಪೂಜಾರಿ ಅವರನ್ನು ಕೂಡ ಸನ್ಮಾನಿಸಲಾಯಿತು. ತದ ನಂತರ 9 ಜನ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅಸೋಸಿಯೇಷನ್ ಹಾಗೂ ಡಾ.ಕರ್ನಲ್ ಮಾಧವ ಶಾನುಭಾಗ್ ಅವರಿಂದ ಸಹಾಯಧನ ವಿತರಿಸಲಾಯಿತು ಕಾರ್ಯಕ್ರಮ ವನ್ನು ಡಾ.ದಿವ್ಯಶ್ರೀ ರಘು ಅವರು ನಿರೂಪಿಸಿದರು. ಅನಂತರ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.
